Saturday, January 03, 2009

 

ಹೊಸವರ್ಷದ ಕೊಡುಗೆ: ಷಡಕ್ಷರಿ ಮಂತ್ರಗಳೂ, ಭಟ್ಟರ ಮಾತುಗಳೂ, ಅಪರ್ಣಾದೇವಿಯ ವಚನಗಳೂ....

ನನ್ನೆಲ್ಲ ಬ್ಲಾಗ್ ಬಾಂಧವರಿಗೆ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು. ಇದೇನು? ಭಾರತೀಯರಿಗೆ/ಹಿಂದುಗಳಿಗೆ ಹೊಸವರ್ಷವೆಂದೇ ಎಂದು ಹುಬ್ಬೇರಿಸಬೇಡಿ, ದಯವಿಟ್ಟು. ನಮ್ಮದು ಹಿಂದೂ ಧರ್ಮವಲ್ಲ; ಇಂಡಿಯಾ ಎನ್ನುವುದು ಹೇಗೆ ಅನ್ಯರಿಟ್ಟ ನಾಮವೋ ಅಂತೆಯೇ ಈ "ಹಿಂದೂ" ಕೂಡಾ. "ಸಿಂಧೂ" ಎಂಬುದರ ಅಪಭ್ರಂಶವಿದು. ನಮ್ಮ ಧರ್ಮ ತೀರ ಹಳೆಯದು, ಆದ್ದರಿಂದಲೇ ಸನಾತನಧರ್ಮವೆಂದೂ, ವೇದಗಳ ಮೇಲಾಧಾರಿತವಾದ್ದರಿಂದ ವೈದಿಕಧರ್ಮವೆಂದೂ ಕರೆಯುವುದು ಹೆಚ್ಚು ಸೂಕ್ತ. ಆದು ನಮ್ಮ, ನಿಮ್ಮ ಸೊತ್ತು ಮಾತ್ರವಲ್ಲ, ವಿಶ್ವಧರ್ಮ. ಇದೇನಪ್ಪಾ, ಶೀರ್ಷಿಕೆಗೂ, ಮೊದಲನೇ ಪ್ಯಾರಾಗೂ ತಾಳ-ಮೇಳವಿಲ್ಲವೆಂದುಕೊಳ್ಳುತ್ತಿದ್ದೀರಾ? ಹಾಗೇನಿಲ್ಲ, ಸ್ವಲ್ಪ ತಾಳಿ. ನಮ್ಮದು ವಿಶ್ವಧರ್ಮವಾದ್ದರಿಂದ ವಿಶ್ವದ ಎಲ್ಲ ಸದಾಚರಣೆಗಳನ್ನು ಎರವಲು ಪಡೆದುಕೊಳ್ಳುವುದರಲ್ಲಿ ತಪ್ಪೇನಿದೆ? ಪಕ್ಕದ ಮನೆಯ ಪುಟ್ಟ ಝೀಶಾನ್-ಗೆ ರಮ್ಝಾನ್ ಸಮಯದಲ್ಲಿ, ಎದುರು ಮನೆ ರೋಸಿಗೆ ಕ್ರಿಸ್ಮಸ್-ಗೆ ಹಾರೈಸುತ್ತೇವೆ, ಹಾಗೂ ನಮ್ಮನೆಗೂ ಹಬ್ಬಕ್ಕೆ ಕರೆಯುತ್ತೇವೆ. ಆದ್ದರಿಂದ ಯುಗಾದಿಯಷ್ಟೇ ಸಂಭ್ರಮದಿಂದ ಕ್ಯಾಲೆಂಡರ್ ಹೊಸವರ್ಷವನ್ನೂ ಆಚರಿಸುತ್ತೇವೆ. ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ, ಮುಂದೆ ನಿಮಗೊಪ್ಪಿಸಲಿರುವ ಷಡಕ್ಷರಿ ಬೀಜಮಂತ್ರಗಳು ಮತ್ತು "ವಿಶ್ವ"ಭಟ್ಟರ ನೂರೆಂಟು ಮಾತುಗಳು ಹೊಸವರ್ಷದ ಸಲುವಾಗಿ ಜನವರಿ ೧ ರ ವಿಜಯ ಕರ್ನಾಟಕ (ವಿ..) ದಿನಪತ್ರಿಕೆಯಲ್ಲಿ ಬಂದಿದ್ದು.

ವಿ.. ಸಮಸ್ತ ಕನ್ನಡಿಗರ ಹೆಮ್ಮೆ. ನಾನಂತೂ ಅದನ್ನು ಪ್ರಥಮ ಸಂಚಿಕೆಯಿಂದಲೇ ಓದುತ್ತಿದ್ದೇನೆ. ಈಗಲೇ ಹೇಳಿಬಿಡುತ್ತೇನೆ, ಯಾವ ದಿನಾಂಕವನ್ನೂ ನಿಖರವಾಗಿ ನೆನಪಿಟ್ಟುಕೊಂಡಿಲ್ಲ. ಆದರೆ ನಾನಿಲ್ಲಿಟ್ಟಿರುವ ಮಾಹಿತಿಯೆಲ್ಲವೂ ನಂಬಲರ್ಹವಾದದ್ದು. ನನ್ನ ಪ್ರೀತಿಯ ಪುಟ ಸಂಪಾದಕೀಯ ಪುಟ; ಆಮೇಲಿಂದು ಕರಾವಳಿ ಯಾ ಬೆಂಗಳೂರು ವಿಜಯ (ಮುಖ್ಯವಾಗಿ ಸಿಂಪ್ಲಿಸಿಟಿ ಪೇಜ್), ಅನಂತರ ಮಹಿಳಾ ವಿಜಯ, ಶಿಕ್ಷಣ ವಿಜಯ ಇತ್ಯಾದಿ. ಡುಂಡಿರಾಜ್ ಅವರ ಮಾತು-(ವಿ)ತೆ ಮೌನಕ್ಕೆ ಶರಣಾದಾ, "ನಮ್ಮ" ಸಿಂಹ (ಅಂಕಣದ ಹೆಸರು "ನಿಮ್ಮ ಸಿಮ್ಮ") "ಗುಹೆ"ಯಲ್ಲಿ (ಅವರ ಮನೆ ಹೆಸರು "ಗುಹೆ") ಗೊರಕೆ ಹೊಡೆಯಲು ಶುರು ಹಚ್ಚಿದಾಕಳವಳದಿಂದ ಎಷ್ಟು ನಿಟ್ಟುಸಿರಿಟ್ಟೆನೆಂದು ನನಗಷ್ಟೇ ಗೊತ್ತು. ಬಾಲ್ಕನಿಯಿಂದ ಪ್ರತೀ ಮಂಗಳವಾರ ಇಣುಕುತ್ತಿದ್ದ ಸಹಜಾ, ಅವಳ ಗೆಳತಿ ಚವತಿ ಎಲ್ಲಿ ಮರೆಯಾದರೋ ನಾ ಕಾಣೆ. "ಬತ್ತದ ತೆನೆ"ಯನ್ನೂ "ಸ್ವಾಮಿ ಅನಾಮಧೇಯಪೂರ್ಣ"ರು ತಮ್ಮೊಂದಿಗೆ ವಲಸೆ ಒಯ್ದರೆಂದೆನಿಸುತ್ತದೆ. ಅಯ್ಯೋ, ಎರಡನೇ ಪ್ಯಾರಾದಲ್ಲೂ ಸುಮ್ಮನೇ ಬುಶ್ ಅನ್ನು ಬೀಟ್ ಮಾಡ್ತಿದೀಯಲ್ಲಾ ಎಂದು ಕೇಳ್ಬೇಡಿ. ಷಡಕ್ಷರಿ, ಭಟ್ಟರು ಮತ್ತು ಅಪರ್ಣಾದೇವಿಯ ನಡುವಿನ ಕೊಂಡಿಯಾಗಿರುವ ವಿ.. ಬಗ್ಗೆ ಒಂದೆರಡು ಮಾತಾದರೂ ಬರೆಯದಿದ್ದರೆ ಕೃತಘ್ನತೆಯ ಪರಮಾವಧಿಯಾಗುವುದಿಲ್ಲವೇ?

ಸರಿ, ಇದೀಗ ವಿಷಯಕ್ಕೆ ಬಂದರೆ, ಏನೀ ಷಡಕ್ಷರಿ ಬೀಜಮಂತ್ರಗಳು? .೧ರ ವಿ..ದಲ್ಲಿ ಷಡಕ್ಷರಿಯವರು ಓದುಗರಿಗಾಗಿ ಪ್ರೀತಿಯಿಂದ ಕೊಟ್ಟ ಈ ೫೨ ಸೂತ್ರಗಳನ್ನು ದಿ.

ಮತ್ತೆ "ಫಂಡಾ ಲಿಸ್ಟಾ?" ಅಂತ ಮೂಗು ಮುರಿಯಬೇಡಿ. ಒಂದೊಂದರ ಬಗ್ಗೆಯೂ ತುಸು ಹೊತ್ತು ಯೋಚಿಸಿದರೆ, "ಹೌದಲ್ವಾ?" ಅನಿಸುತ್ತದೆ, ಅದು ನಿಮ್ಮದಾಗುತ್ತದೆ. ಇನ್ನು ಸಂದರ್ಭ ಬಂದಾಗ ಅದನ್ನು ನೆನಪಿಸಿಕೊಂಡು ಅಳವಡಿಸಿಕೊಳ್ಳುವುದಷ್ಟೇ ಬಾಕಿ.

ಷಡಕ್ಷರಿಯವರ ಬಗ್ಗೆ ಅಪರ್ಣಾದೇವಿ: ನನಗೆ ಇವರ ಬಗ್ಗೆ ಹೆಚ್ಚಿಗೆ ಏನೂ ಗೊತ್ತಿಲ್ಲ; ಅವರು ಶನಿವಾರ ಹೊರತಾಗಿ (ವಿವಾರ ಅಂಕಣಕ್ಕೆ ರಜಾ), ದಿನಾ ಚಿಕ್ಕ, ಚೊಕ್ಕ ಬರಹಗಳನ್ನು ಬರೆಯುತ್ತಾರೆ ವಿ..ದ ಅಂಕಣ "ಕ್ಷಣಹೊತ್ತು ಆಣಿಮುತ್ತು"ಗಾಗಿ. ಇವತ್ತಿಂದೂ ಸೇರಿ ಒಟ್ಟು ೪೬೩ ಬರಹಗಳಾಗಿವೆ. ಕೇಳಿದ, ಓದಿದ ಚಿಕ್ಕ ಘಟನೆಗಳನ್ನು ಅವುಗಳ ನೀತಿಯೊಂದಿಗೆ ಉಲ್ಲೇಖಿಸುತ್ತಾರೆ. ಇವುಗಳ ಸಂಕಲನಗಳು ಬಿಡುಗಡೆಯಾಗಿವೆ. ಪ್ರಖ್ಯಾತ ಹೋಟೆಲ್ ಗ್ರೂಪ್ "ಮಣಶ್ರೀ"ಯ ಮಾಲೀಕರು! "ಟೈಮಿಲ್ಲ, ಟೈಮಿಲ್ಲ" ಎಂದು ಸದಾ ಹಲುಬುವವರಿಗೆ ಉತ್ತಮ ಮಾದರಿಯೆಂದು ನನ್ನ ಊಹೆ.

ಇನ್ನು ತಲೆಬರಹದಡಿಯ ಎರಡನೇ ವಿಷಯ ಎತ್ತಿಕೊಳ್ಳೋಣ. ಅದೃಷ್ಟಕ್ಕೆ ಈ ವರ್ಷ ಜ.೧ ಗುರುವಾರದ ಮೇಲೆ ಬಿತ್ತು. ಗುರುವಾರದ ಮುಖ್ಯ ಅಂಕಣ "ನೂರೆಂಟು ಮಾತು", ವಿ.. ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರದು. ಆವರ ಸಲಹೆಗಳನ್ನು ಅವರಿಂದಲೇ ಓದಿ. ಕೆಲವೊಂದಾದರೂ ಅನುಸರಿಸಬೇಕೆಂದೆನಿಸದಿದ್ದರೆ ಮತ್ತೆ ಕೇಳಿ.

ವಿಶ್ವೇಶ್ವರ ಭಟ್ ಬಗ್ಗೆ ಅಪರ್ಣಾದೇವಿ: ಅಯ್ಯೋ, ನನ್ನನ್ನು ಭಟ್ಟರ ಭಟ್ಟಂಗಿ ಎಂದುಕೊಳ್ಳಬೇಡಿ. ನನ್ನ ಆಪ್ತ ಸ್ನೇಹಿತರಿಗೆಲ್ಲಾ ಗೊತ್ತಿರುವಂತೆ, ನಾನ್ಯಾರ ಭಟ್ಟಂಗಿತನ ಮಾಡುವುದೇ ಇಲ್ಲ. ಸ್ವಲ್ಪ ಕಟು ಟೀಕೆ ಮಾಡುವುದೇ ಹೆಚ್ಚು. ಇದೇ ಒಕ್ಟೋಬರ್-ನಲ್ಲಿ ದಶಮಾನೋತ್ಸವ ಆಚರಿಸಿದ ವಿ..ದ ಯಶಸ್ಸಿನ ಹಿಂದಿರುವ ಶಕ್ತಿಯ ಬಗ್ಗೆ ಬರೆದರೆ ಅದು ವ್ಯಕ್ತಿಸ್ತುತಿ ಎಂಬುದರ ಬದಲು ಉತ್ತೇಜನಬರಹ ಎಂದೆನಿಸುತ್ತದೆ. ಅಲ್ಲದೆ, ನನಗೇನೂ ಅವರನ್ನು ವೈಯಕ್ತಿಕವಾಗಿ ಗೊತ್ತಿಲ್ಲ.

ಭಟ್ಟರು ಯಾವಾಗ ಸಂಪಾದಕರಾದರೆಂದುದು ನೆನಪಿಲ್ಲ, ಆದರೆ ಸುಮಾರು ೫-೬ ವರ್ಷಗಳಿಗಿಂದೀಚೆಗೆ ಅವರೇ ಸಂಪಾದಕರಾಗಿದ್ದಾರೆ. ಪ್ರಾದೇಶಿಕಭಾಷಾ ಪತ್ರಿಕೋದ್ಯಮದಲ್ಲಿ ಒಳ್ಳೆ ಹೆಸರು ಗಳಿಸಲು ಅದರದ್ದೇ ಆದ ಇತಿಮಿತಿಗಳಿವೆ. ಮುಖ್ಯವಾಗಿ ಓದುಗರ ಸಂಖ್ಯೆ. ಆದರೆ ಇವರು ಅದೆಲ್ಲವನ್ನೂ ಮೀರಿದ್ದಾರೆ, ಏಕೆಂದರೆ, ಒಮ್ಮೆ ಇವರ ಅಭಿಮಾನಿಯಾದವರು, ಹಾಗೆಯೇ ಉಳಿಯುತ್ತಾರೆ. ಪ್ರತಿಯಾಗಿ, ನನ್ನ ಬ್ಲಾಗ್ ಉದಾಹರಣೆ ತಗೊಂಡರೆ, ಓದುಗರು "ಫಸ್ಟ್ ಇನ್, ಫಸ್ಟ್ ಔಟ್" ಕ್ಯೂ ಥರ, ಬರ್ತಾರೆ, ನಾಕು ದಿನ ಒದ್ತಾರೆ, ಹೋಗ್ತಾರೆ (ಬೇಸರದಿಂದಲ್ಲ, ಇರುವ ವಿಷಯ ಹೇಳ್ತಿದೇನೆ). ಕೆಲವೊಂದು ಅಂಕಣಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಭಟ್ಟರು ವಿ..ಗೆ ಒಂದೆರಡಲ್ಲ, ಸದ್ಯಕ್ಕೆ ವಾರಕ್ಕೆ ೪ ಅಂಕಣ ಬರೆಯುತ್ತಾರೆ. "ವಕ್ರತುಂಡೋಕ್ತಿ" (ಪ್ರತಿ ದಿನ),"ಜನಗಳ ಮನ" (ರವಿವಾರ), "ನೂರೆಂಟು ಮಾತು" (ಗುರುವಾರ) ಮತ್ತು "ಸುದ್ದಿಮನೆ ಕತೆ" (ಶನಿವಾರ). ಇದಿಷ್ಟು ಅವರ ಹೆಸರಲ್ಲಿ. ಇನ್ನು, ಈ ಹಿಂದೆ ದಿನ ಬಿಟ್ಟು ದಿನ "ಸ್ವಾಮಿ ಅನಾಮಧೇಯ ಪೂರ್ಣ"ರೆಂಬ ಹೆಸರಿನಲ್ಲಿ "ಬತ್ತದ ತೆನೆ", ಹಾಗೆಯೇ ನನ್ನ ಊಹೆ ಸರಿಯೆಂದಾದರೆ (ಆದರೆ ಏನು, ಖಂಡಿತಾ ಹೌದು!) ವಾರಕ್ಕೊಮ್ಮೆ ೨೦ರ ಹೊಸಿಲಲ್ಲಿದ್ದ ಯುವತಿಯ ಲೇಖನಿಯಿಂದ ಬರೆಯುತ್ತಿದ್ದಂತೆ, ಈಗಲೂ ಕಾವ್ಯನಾಮದಲ್ಲಿ ಬರೆಯುತ್ತಿರಬಹುದು. ೨೦೦೨-೦೩ರ ಸಾಲಿನಲ್ಲಿ ಒಟ್ಟು ೬ ಅಂಕಣಗಳನ್ನು ಅವರೊಬ್ಬರೇ ಬರೆಯುತ್ತಿದ್ದರೆಂದು ಅಂದಾಜು. ಅದೂ ಎಲ್ಲ ವೈವಿಧ್ಯಮಯ! ಒಂದು ವಾಕ್ಯದ "ವಕ್ರತುಂಡೋಕ್ತಿ"ಯಲ್ಲಿ ಮುಖ್ಯವಾಗಿ ಹೆಂಗಸರ ಬಗ್ಗೆ, ಮದುವೆಯ ಬಗ್ಗೆ ಇರುತ್ತದೆಯಾದ್ದರಿಂದ ಅದರ ಮೇಲೆ ನನ್ನದೊಂದು ಉಕ್ತಿ: "ವಕ್ರತುಂಡೋಕ್ತಿಯನ್ನು ಆನಂದಿಸಲಿಕ್ಕಾದರೂ ಗಂಡಸರು ವಿ.. ಓದಬೇಕು". ನಿಮ್ಮಲ್ಲಿ ಹೆಚ್ಚಿನವರೂ ಇಂಜಿನಿಯರ್-ಗಳು. ನಿಮಗೆ ಗೊತ್ತು, ಒಂದು ಕಂಪೆನಿಯ ಸಿ... ಅಥವಾ ಐ..ಎಸ್ಸಿ, ..ಟಿಗಳಂತ ರಿಸರ್ಚ್ ಸಂಸ್ಥೆಗಳ ಪ್ರಾಚಾರ್ಯರೆಲ್ಲ ಎಷ್ಟು ಬಿಜಿ ಇರುತ್ತಾರೆ ಅಂತ. ನನ್ನ ಪ್ರಕಾರ ಪತ್ರಿಕಾ ಸಂಪಾದಕರೂ, ಅಲ್ಲಿನ ಕೆಲಸಗಾರರೂ ನಮಗಿಂತ ಎಷ್ಟೋ ಜಾಸ್ತಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ಏಕೆಂದರೆ, ಪತ್ರಿಕೆಯ ಡೆಡ್ಲೈನ್-ಗಳು ಇನ್ನೂ ಹೆಚ್ಚು ಕಟ್ಟುನಿಟ್ಟು. ಪಾಲಿಸದಿದ್ದರೆ ಪತ್ರಿಕೆ ಸತ್ತಂತೆಯೇ ಸರಿ. ಜವಾಬ್ದಾರಿಯುತ ಪದವಿಯಲ್ಲಿದ್ದುಕೊಂಡು, ಇಷ್ಟು ಕಡಿಮೆ ಅವಧಿಯಲ್ಲಿ ಈ ವರೆಗೆ ಸುಮಾರು ೨೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ; ಅವುಗಳಲ್ಲಿ ಕೆಲವು ಅಂಕಣ ಸಂಕಲನಗಳು, ಕೆಲವು ಅನುವಾದಗಳು, ಹಲವು ಬಯಾಗ್ರಫಿಗಳು ಮತ್ತು ಇನ್ನಿತರ. ಅವರು ಇದೆಲ್ಲಾ ತಮ್ಮ ಆಫೀಸ್-ನಲ್ಲಿ ಕೂತ್ಕೊಂಡು ಮಾಡಿದ್ದಿದ್ದರೆ ಆಶ್ಚರ್ಯವೇನಿರಲಿಲ್ಲ. ಆದರೆ, "ದೇಶ ಸುತ್ತು, ಕೋಶ ಓದು" ಎನ್ನುವುದನ್ನು ಅಕ್ಷರಶಃ ಪಾಲಿಸಿದ್ದಾರೆ. ವಿದೇಶಗಳಿಗೆ ಹೋಗಿಬಂದಾಗಲೆಲ್ಲಾ ಅನುಭವಗಳ ಚಿತ್ರಣವನ್ನು ಕೂಲಂಕುಶವಾಗಿ ಓದುಗರ ಮುಂದಿಡುವ ಪರಿಪಾಠವಿಟ್ಟುಕೊಂಡಿದ್ದಾರೆ. ಡಾ.ಕಲಾಮ್-ರು ರಾಷ್ಟ್ರಪತಿಯಾಗಿದ್ದಾಗ ಅವರ ಜೊತೆ ಹದಿನೈದು ದಿನ ನಾಲ್ಕು ದೇಶ ಸುತ್ತಿದ್ದರು. ಒಮ್ಮೆ ಇವರ ಪುಸ್ತಕಪ್ರೀತಿಗೆ ಮಾರುಹೋದ ಸಹೃದಯೀ ಓದುಗರೊಬ್ಬರು ಅಮೂಲ್ಯವಾದ ಹಳೆಯ ಪುಸ್ತಕಗಳನ್ನು ಕೊರಿಯರ್ ಮಾಡಿದ್ದನ್ನು "ಜನಗಳ ಮನ"ದಲ್ಲಿ ಬರೆದಿದ್ದರು.

ಪತ್ರಿಕೆಯ ಪಾಲಿಸಿಯನ್ನು ಗಮನಿಸುತ್ತಾ ಬಂದಿದ್ದೇನೆ. ಟೈಮ್ಸ್ ಗ್ರೂಪ್ ವಿ..ವನ್ನು ವಶಕ್ಕೆ ತಗೊಂಡಾಗ ಎಲ್ಲಿ ಗುಣಮಟ್ಟ ಕಡಿಮೆಯಾಗುವುದೋ ಎಂಬ ಆತಂಕವಿತ್ತು. ಎರಡು ವರ್ಷದ ಮೇಲಾಯ್ತು ಅದಾಗಿ, ಆದರೂ ಪತ್ರಿಕೆಯ ವರ್ಚಸ್ಸು ಬೆಳೆಯುತ್ತಲೇ ಹೋದ್ದಕ್ಕೆ ಇವರ ಎದೆಗಾರಿಕೆಯೇ ಮುಖ್ಯ ಕಾರಣವಲ್ಲವೇ? ನಂ ೧ ದಿನಪತ್ರಿಕೆ ಎಂಬ ಅಗ್ಗಳಿಕೆ ಸುಮ್ಮನೆ ಸಿಗುತ್ತದೆಯೆ? ಎಂತಹ ಮೊಂಡು, ಮೂಡಿ ಪತ್ರಕರ್ತರ ಕೈನಲ್ಲೂ ಬೇಕಾದಂತೆ ಕೆಲಸ ಮಾಡಿಸಿಕೊಳ್ಳುವ ಛಾತಿ, ಜಾಣ್ಮೆ ಎಲ್ಲಾ ಇವೆ ಅನ್ನಿಸುತ್ತದೆ. ನಮ್ಮನ್ನು ಸಮಯಕ್ಕೆ ಸರಿಯಾಗಿ ಹೊಂದಿಸಿಕೊಳ್ಳುವುದು ಹೇಗೆಂದು ಇವರಿಂದ ಕಲಿಯಬಹುದು. ಟೈಮ್ ಮ್ಯಾನೇಜ್-ಮೆಂಟ್, ಪೀಪ್ಲ್ ಮ್ಯಾನೇಜ್-ಮೆಂಟ್ ಎಲ್ಲಾ "ವೃಷಭ ವಿಸರ್ಜಿತ" (ಪದ ಸೌಜನ್ಯ: ವಿ.ಕ.ದ ರವಿವಾರದ ಅಂಕಣ ಪರಾಗ ಸ್ಪರ್ಶದಲ್ಲಿ ಶ್ರೀವತ್ಸ ಜೋಶಿ) ಅಷ್ಟೇ. ವಿಶ್ವೇಶ್ವರ ಭಟ್ಟರ ಲೇಖನಗಳಿಂದ ವ್ಯಕ್ತವಾಗುವಂತೆ, ಅವರೊಬ್ಬ ಪ್ರಾಕ್ಟಿಕಲ್ ಅಜಾತಶತ್ರು. (ಹೊಟ್ಟೆಕಿಚ್ಚಿನಿಂದ ಅವರ ವಿರುದ್ಧ ಬರೆಯುವವರನ್ನು ಶತ್ರುಗಳೆಂದು ಲೆಕ್ಕ ಹಾಕಬಾರದು.) ಅವರಿಗಾಗಿ ಒಂದು ವಿಕಿಪೀಡಿಯ ಎಂಟ್ರಿ ಇಲ್ಲ, ಅವರು ತಮ್ಮದೊಂದು ವೆಬ್-ಸೈಟ್ ಇಟ್ಕೊಂಡಿಲ್ಲ, ಓರ್ಕಟ್ ಪ್ರೊಫ಼ೈಲ್ "ಇದು ಇವ್ರದಾ?" ಅನ್ಸೋ ಥರ ಇದೆ.

ಇಷ್ಟೆಲ್ಲಾ ಹೇಳಿದ ಮೇಲೆ, ಅವರ ವಿದ್ಯಾಭ್ಯಾಸ ಇತ್ಯಾದಿ ವಿವರಗಳನ್ನು ಕೊಡದಿದ್ದರೆ ಈ ಬ್ಲಾಗ್ ಅಪೂರ್ಣವೆನಿಸುತ್ತದೆ. ಎಂ.ಎಸ್ಸಿ., ಎಂ.. (೪ ಚಿನ್ನದ ಪದಕದೊಂದಿಗೆ) ಮಾಡಿ, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಏಷಿಯನ್ ಕಾಲೇಜ್ ಆಫ್ ಜರ್ನಲಿಸಂ-ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. ಕನ್ನಡಪ್ರಭ ಮತ್ತು ಸಂಯುಕ್ತ-ಕರ್ನಾಟಕದಲ್ಲೂ ಕೆಲಸ ಮಾಡಿದ್ದಾರೆ. ಇವರ ಸಾಧನೆಗಳಿಗೆ ಸಂದ ಅತ್ಯುನ್ನತ ಗೌರವವೆಂದರೆ ೨೦೦೫ರ (ಸುವರ್ಣ ಕರ್ನಾಟಕ) ರಾಜ್ಯೋತ್ಸವ ಪ್ರಶಸ್ತಿ.

ನಮ್ಮ ಸಮಾಜದಲ್ಲಿ ಹಲವರ ಮನಸ್ಸಿನಲ್ಲಿ ಪತ್ರಿಕೋದ್ಯಮದ ಬಗ್ಗೆ, ಪತ್ರಿಕೋದ್ಯಮಿಗಳ ಬಗ್ಗೆ ಸದಭಿಪ್ರಾಯವಿಲ್ಲ. ಏಕೋ ಗೊತ್ತಿಲ್ಲ. ಆದರೆ ವಿಶ್ವೇಶ್ವರಭಟ್ಟರಿಂದ ನಾವು ಕಲಿಯುವುದು ಸಾಕಷ್ಟಿದೆಯೆಂದೆನಿಸಿತು.


Comments:
ಅಪರ್ಣಾ ಅವರೇ, ಷಡಕ್ಷರಿಯವರ ೫೨ ಸೂತ್ರಗಳೂ ಸಖತ್ತಾಗಿವೆ.. ಇದನ್ನು ಬ್ಲಾಗಿನಲ್ಲಿ ಹಾಕಿ ಓದುವಂತೆ ಮಾಡಿದ್ದಕ್ಕೆ ಅನಂತಾನಂತ ಧನ್ಯವಾದಗಳು.
 
ಹಾಗೇ ಹೊಸ ವರ್ಷದ ಶುಭಾಶಯಗಳು ಕೂಡ..
 
Aparna Devi's words on something...
 
Post a Comment

Subscribe to Post Comments [Atom]





<< Home

This page is powered by Blogger. Isn't yours?

Subscribe to Posts [Atom]